Sunday, October 28, 2007

ಅಮ್ಮ

ಮುಟ್ಟುವ ಆಸೆ ಚಂದಿರನ, ಮುಟ್ಟಲಾಗುವುದೇ..
ಹಾರುವ ಆಸೆ ಮೆಗಗಳೊಡನೆ, ಹಾರಲಾಗುವುದೇ..
ಈಜುವ ಆಸೆ ಮೀನಿನೊಡನೆ, ಈಜಳಗುವುದೇ..
ತೀರಿಸುವಾಸೆ ತಾಯಿಯ ಋಣವ, ತೀರಿಸಲಾಗುವುದೇ !!

ಹೇಗೆ ಸಹಿಸಿದೆ ಅಮ್ಮ ನೀ,
ನಿನ್ನ ಗರ್ಭಧಲ್ಲಿ ನಾ ಓದ್ದ ನೋವ..
ಗರ್ಭಗುಡಿಯನ್ನೊಡೆದು ಹೊರ ಬಿದ್ದ ನೋವ..
ಎದೆ ಹಾಲನ್ನುನಿಸುವಾಗ ನಾ ಕಚ್ಚಿದ ನೋವ..
ತಿಳಿಹೇಳಳೆಂದು ನೀ ಕೊಟ್ಟ ಒಂದು ಪೆಟ್ಟ ನೋವನ್ನು ನಾ ಸಹಿಸಲಿಲ್ಲವಲ್ಲ !!
ನಿನ್ನ ಸಹನೆಗೆ ನನ್ನ ನಮನ.

ಉಸಿರಾಗುವ ಗಾಳಿಯಾದರು ಕೊಂದೀತು ಬಿರುಗಾಳಿಯಾಗಿ,
ದಾವಾರಿಸುವ ನೀರಾದರು ಕೊಂದೀತು ಪ್ರವಾಹವಾಗಿ,
ಕತ್ತಲನ್ನಳಿಸುವ ಬೆಳಕದರು ಕೊಂದೀತು ಕಾಡ್ಗಿಚಾಗಿ,
ಜೀವಕ್ಕೆ ಉಸಿರಿತ್ತು, ಅಕ್ಕರೆಯಲಿ ಹಾಲುಣಿಸಿ,
ಬದುಕಿಗೆ ಜ್ಯೋತಿಯಾದ ನನ್ನಮ್ಮ, ನೀ ಮೂರಕ್ಕು ಮಿಗಿಲು...

Cont....

ಶ್....!!

1 comment:

Unknown said...

olle prayatna madidira.......still it has to b matured...........nangansutte nimge yaaro spoorthi idaare anta....ottnalli nimmamma chennagirbeku anta hudgi hudko kashtanu kodtilla ansutthe......really nice writings
......keep it up.