Wednesday, March 16, 2016

ಅಪ್ಪ-ಅಮ್ಮ

ಎಲ್ಲರಿಗೂ ನನ್ನ ನಮಸ್ಕಾರಗಳು. ಅಪ್ಪ ಹಾಗೂ ಅಮ್ಮನಿಗೆ ಒಂದು ದಿನ ಆಚರಣೆ ಇದೆ ಎಂದು ನನಗೆ ತಿಳಿದದ್ದೇ ಅಮೇರಿಕ ಗೆ

ಬಂದಮೇಲೆ. ತಿಳಿದು ಕುಶಿ ಪಟ್ಟಿದೆನೋ ನಿಜ. ಆದ್ರೂ ಒಂದು ಸಂದೇಹ, ಈ ಜನ ಬಂದನಕ್ಕೆ ಇಸ್ಟು ಬೆಲೆ ಕೊಡುತ್ತರ? ಇವರಿಗೂ

ಅಪ್ಪ ಅಮ್ಮ ನನ್ನ ಕಂಡರೆ ನಮ್ಮಾಸ್ಟೆ ಪ್ರೀತಿ ನಾ! ಇದು ನನ್ನ ಸಣ್ಣ ಸಂದೇಹ. ಅದು ಹಾಗೆ ಇರಲಿ ಬಿಡಿ, ಇತ್ತೀಚಿನ ದಿನಗಳಲ್ಲಿ ನಮ್ಮ

ದೇಶದಲ್ಲೂ ಪ್ರೀತಿ ವಾತ್ಸಲ್ಯಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಈ ದಿನವನ್ನಾದರೂ ಸಂತೋಷದಿಂದ ಆಚರಿಸೋಣ. ಅಪ್ಪ

ಅಮ್ಮಂದಿರಿಗೆ ಸಣ್ಣದಾಗಿ ಶುಭಾಶಯ ಹೇಳಿ ನೋಡಿ, ಆಮೇಲೆ ನಿಮಗೆ ತಿಳಿಯುತ್ತದೆ ಆ ಕುಶಿಯ ರುಚಿ. ಯಾವ ಸಿಹಿ ತಿಂಡಿ ತಿಂದರೂ

ನಿಮಗೆ ಆಗದ ಆ ಒಂದು ಅನುಭವ. ಅವರ ಮುಖದಲ್ಲಿ ಅರಳುವ ಒಂದು ಪುಟ್ಟ ನಗು ದಿನವನ್ನು ಆಹ್ಲಾದ ಪಡಿಸುತ್ತದೆ.

ಅಪ್ಪ ಹಾಗೂ ಅಮ್ಮ ನಮ್ಮ ಜನ್ಮದಾತರು. ಕಾಣದ ದೇವರಿಗೆ ವಾರಕ್ಕೆ ಒಂದು ದಿನ, ವರುಷಕ್ಕೆ ಒಂದು ಹಬ್ಬ ಇರುವಾಗ ಕಾಣುವ

ದೇವರುಗಳಿಗೆ (ಅಪ್ಪ ಅಮ್ಮ) ವರುಷಕ್ಕೆ ಒಂದು ದಿನ ಬೇಡವೇ! ಕಂಡಿತ ಬೇಕು, ಇದು ನನ್ನ ಸ್ವಂತ ಅಭಿಪ್ರಾಯ. ಈ ಭೂಮಿಯ

ಮೇಲಿರುವ ಪ್ರತಿ ಜೀವಿಗೂ ಅಪ್ಪ ಅಮ್ಮ ಇರಲೇ ಬೇಕು ಅಲ್ವಾ. ಅದು ಪ್ರಾಣಿ, ಪಕ್ಷಿ, ಗಿಡ, ಮರ, ಮಾನವ ಇತ್ಯಾದಿ ಯಾವುದೇ

ಜೀವಿಗೂ ತಂದೆ ತಾಯಿ ಇದ್ದೇ ಇರುತ್ತಾರೆ. ಪ್ರಾಣಿ ಪಕ್ಷಿಗಳು ತಮ್ಮ ತಮ್ಮ ಕಂದಮ್ಮಗಳನ್ನು ಎಷ್ಟು ಪ್ರೀತಿ ಮಾಡುತ್ತವೆ

ತಿಳಿಯಬೇಕಾದ್ರೆ ಒಂದು ಹಸು ತನ್ನ ಕರುವಿಗೆ ಹಾಲುಣಿಸುವುದನ್ನು ನೋಡಿ, ಒಂದು ಕೋಳಿ ತನ್ನ ಮರಿಗಲ್ಲೂ ಬೆಚ್ಚಗಿರಿಸುವುದನ್ನು

ನೋಡಿ, ಒಂದು ಮರ ತನ್ನ ಸಸಿಗೆ ನೆರಳಾಗುವುದನ್ನು ನೋಡಿ. ಹಾಗೆ ನಮ್ಮ ತಂದೆ ತಾಯಿಯರು ನಮ್ಮನು ರಕ್ಷಿಶಿ, ಸುರಕ್ಷಿಶಿ,

ಕಾಪಾಡಿಕೊಂಡಿದ್ದಾರೆ. ಅವರ ಪ್ರೀತಿ ನಾವು ಗರ್ಭದಲ್ಲಿ ಇದ್ದಾಗಿನಿಂದ ಭೂಗರ್ಭ ಸೇರುವವರೆಗೂ ಅಚಲ. ತಾಯಿ ಪ್ರೀತಿ ಏನೆಂದು

ತಿಳಿಯಬೇಕಾದರೆ ಮತ್ತೊಬ್ಬ ತಾಯಿಗೆ ಮಾತ್ರ ಸಾಧ್ಯ, ಹಾಗೆ ತಂದೆ ಪ್ರೀತಿ ಕೂಡ ಮತ್ತೊಬ್ಬ ತಂದೆ ಮಾತ್ರ ತಿಳಿದೀತು! ಎನ್ನುವ

ಮಾತು ಸತ್ಯ.

ಒಂದು ಪರೀಕ್ಷೆ ಮಾಡೋಣ. ನೀವು ನಿಮ್ಮ ಅಪ್ಪ ಅಮ್ಮನೊಡನೆ ಅತಿ ಸಂತೋಷದಿಂದ ಕಾಲ ಕಳೆದ ಒಂದು ಸನ್ನಿವೇಶ ಒಮ್ಮೆ

ನೆನಪು ಮಾಡಿಕೊಳ್ಳಿ, ನಿಮ್ಮ ಬಾಲ್ಯದ ದಿನಗಳನ್ನ! ಯಾವುದಾದರೂ ಒಂದು ಹಾಳೆ ಫೋಟೋ ನೋಡಿ. ನಿಮ್ಮ ಅಮ್ಮನ ಒಂದು ಕೈ

ತುತ್ತು, ಅಪ್ಪ ಕೊಟ್ಟ ಒಂದು ಕೈ ಪೆಟ್ಟು ನೆನಪು ಮಾಡಿಕೊಳ್ಳಿ. ಅಪ್ಪನ ಜೊತೆ ಸೈಕಲ್ ಅಥವಾ ಸ್ಕೂಟರ್ ಅಲ್ಲಿ ಒಂದು ರೌಂಡ್ ಹಿಂದೆ

ಗಟ್ಟಿಯಾಗಿ ಕೂತಿದನ್ನು ನೆನಪಿಸಿಕೊಳ್ಳಿ. ನಿಮ್ಮ ಕಣ್ಣಲ್ಲಿನ ಸಣ್ಣ ಸಣ್ಣ  ನೆನಪು, ಒಂದು ಹನಿ ನೀರು ತುಂಬಿ ತರುತ್ತದೆ ಮನಸು ಹುಕ್ಕಿ

ಬರುತ್ತದೆ! ಅದೇ ಪ್ರೀತಿ, ಅದೇ ಅಕ್ಕರೆಯ ಒಂದು ಸಣ್ಣ ಕರೆ. ಆ ಮಧುರ ಭಾವವೇ ಭವ್ಯ ಬಂಧನ.

ಅಪ್ಪ ಅಮ್ಮನ ಪ್ರೀತಿ ವಾತ್ಸಲ್ಯ ನೆನಪಿಗೆ ಮಾತ್ರ ಸೀಮಿತವಾಗದಿರಲಿ. ನೀವು ನಿಮ್ಮ ಮಕ್ಕಳನ್ನು ಎಷ್ಟು ಪ್ರೀತಿ ಮಾಡುತ್ತೀರೋ,

ನಿಮ್ಮ ಅಪ್ಪ ಅಮ್ಮ ನಿಮ್ಮನ್ನು ಅಷ್ಟೇ ಪ್ರೀತಿ ಮಾಡಿರಬೇಕು ಅಲ್ಲವೇ! ಯಾಕಂದರೆ ನಮ್ಮ ವಿಜ್ಞಾನದ ಪ್ರಕಾರ ನಿಮ್ಮಲ್ಲೂ ಅವರದ್ದೇ

ರಕ್ತ ಹಾಗೂ ಅವರದ್ದೇ ಜೀನ್ ಅಲ್ವಾ ಇರೋದು!

ಅಮ್ಮನ ಕರುಳಿನಿಂದ ನಿಮ್ಮನ್ನು ಬೇರ್ಪಡಿಸಿರಬಹುದು! ಆದರೆ ಅದರ ಮಿಡಿತ ನಿಮ್ಮಲ್ಲೇ ಇದೆ! ಒಮ್ಮೆ ನಿಮ್ಮ ಎದೆ ಮುಟ್ಟಿ

ನೋಡಿಕೊಳ್ಳಿ, ನಿಮ್ಮ ಈ ಜೀವಕ್ಕೆ ಕಾರಣ ಅಪ್ಪ ಅಮ್ಮ. ಎಲ್ಲಾ ಅಪ್ಪ ಅಮ್ಮಂದಿರಿಗೂ ನಿಮ್ಮ ದಿನಕ್ಕೆ ಶುಭಾಶಯಗಳು.

ಇಂತಿ,

ಶ್....!
This was written for Minugu News Letter for TVKS - TriValley Kannada Sangha, San Ramon, CA.

Wednesday, March 28, 2012

ರೆಪ್ಪೆ ಬಡಿತ

ಸನ್ನದೊಂದು ಆಸೆ ಕಣ್ಣು ತುಂಬಿದೆ,
ಪ್ರೀತಿಯ ಮಡಿಲ ಸೇರಬೇಕು ಅನ್ನೋ ಹಂಬಲ,
ಕಣ್ಣ ಕನಸ ರೆಪ್ಪೆ ಬೆಚ್ಚಗಿರಿಸಿದೆ...

ರೆಪ್ಪೆ ಪ್ರೀತಿ ಸುಖದಿ ಕಣ್ಣು ಮಲಗಿದೆ,
ಪ್ರೀತಿ ಮನವೂ ಕಣ್ಣ ಒಳಗೆ ಕಂಡಿದೆ,
ಪ್ರೀತಿ ಬಯಸೋ ರೆಪ್ಪೆ ಕಾಣದಾಗಿದೆ...

ಕಣ್ಣ ಕನಸನರಿತ ರೆಪ್ಪೆ ನೋಂದಿದೆ,
ಪ್ರೀತಿ ಬಯಸಬಲ್ಲ ಪ್ರೇಮಿ ನಾನಲ್ಲ,
ನನ್ನ ಬಡಿತ ಕಣ್ಣಿಗೆಂದೂ ಕಾಣಲ್ಲ,
ಕಣ್ಣ ಬಿಟ್ಟು ನಾನು ಎಲ್ಲೂ ಹೋಗೋಲ್ಲ...


ಶ್...!!

ಕನಸು


ಕಣ್ಣಿಗೆ ಕಾಣದೆ ಕಣ್ಣಲ್ಲೇ ಮೂಡುವ ಬಯಕೆ ಈ ಕನಸು,
ಮಾನಸಿನಲ್ಲೊಂದು ಮನೆ ಮಾಡಿ ಮುಧ ನೀಡುವ ಕನಸು...

ಕನಸು ನಿಜವಾದರೆ ಗುರಿ, ಹುಸಿಯಾದರೆ ಹುಚ್ಚು,
ಹುಸಿ ಸತ್ಯದ ಕಣ್ಣಾಮುಚ್ಚಾಲೆ ಈ ಕನಸು...

ಬಯಸದಿದ್ದರು ಬಾಳಲ್ಲಿ ಬಣ್ಣದ ಅಲೆ ಎಬ್ಬಿಸಿ,
ಕಾಮನ ಬಿಲ್ಲಾಗಿ ಕಾಣುವುದು ಕನಸು...

ಕನ್ನಡಿಯೊಳಗು ನಾಚಿಸುವ ಸುಮವೇ ಕನಸು,
ಮುದ್ದು ಪೆದ್ದು ಯೋಚನೆ ಮತ್ತೇನು ಅಲ್ಲ, ಅದು ಒಂದು ಕನಸು...

-ಶ್...!!

Monday, October 24, 2011

ಪ್ರಕೃತಿ

ಸೂರ್ಯನ ಬೆಳಕಿಲ್ಲದೇ ನೀ ಬೆಳಗ ಬಲ್ಲೆಯಾ?
ಮೋಡದ ಮರೆಯಲ್ಲಿ ನಿಂತ ನೀನು ನೆರಳಾಗಬಲ್ಲೆಯಾ?
ಧ್ರುವ ತಾರೆಗೂ ಮೀರಿದ ತಾರೆ ನೀನಾ?
ಉಕ್ಕಿ ಬರುವ ಕಡಲ ಹಲೆಯ ತಡೆಯುವ ಶಕ್ತಿ ನಿನಗಿದೆಯಾ?
ಹಸಿರೇ ಇಲ್ಲದೇ ಉಸಿರಾಡುವ ಯುಕ್ತಿ ನಿನ್ನಲ್ಲುಂಟಾ?
ವರುಣನಿಲ್ಲದೇ ನಿನ್ನ ದಾವಾರಿಸಿಕೊಲ್ಲಬಲ್ಲೆಯಾ?
ಪ್ರಕೃತಿಗೆ ನೀನು ಪರಿಯಾಯ ಆಗ ಬಯಸುವೆಯಾ?
ಮಾನವ ಅಲ್ಪಕಾಲಿಕ, ಪ್ರಕೃತಿ ಚಿರಸ್ತಾಯಿ, ಮರೆಯದಿರು. 

ಇಂತಿ,
ಶಶಿ
 

Tuesday, October 11, 2011

ಕಡಲ ತೀರ

ಕಣ್ಣು ತುಂಬಿ ಬಂದರು ಕರಗದ ನೋವು,
ಮನಸ್ಸಿನಾಳಕ್ಕು ಬೆಳೆದಿದೆ ಅದೇ ಬೇರು...
ನಕ್ಕ ಮನಸು ಮಸುಕಿನಲ್ಲಿ ಮೂಕನಾಗಿದೆ,
ಅಕ್ಕಾ ಪಕ್ಕಾ ಮಳೆಯಾದರೂ ತಿಳಿಯದೇ...
ಮಳೆಯು ತಂದ ಹನಿಗೆ  ಪ್ರೀತಿ ತಣ್ಣಗಾಗಿದೆ,
ಭೂಮಿ ಮಡಿಲ ಒಡ್ಡಿ ನೋವ ಹೀರಿದೆ...

ಕಡಲ ತೀರಾದಲ್ಲಿ ಮೌನ ಕುಳಿತಿದೆ,
ಸದ್ದ ಮಾಡದೇನೇ ಅಲೆಯು ಜಾರಿದೆ,
ಪ್ರೀತಿ ಮನದ ಮಾತು ಕೇಳ ಬಯಸಿದೆ...

ಇಂತೀ,
ಶಶಿ

Tuesday, October 19, 2010

ಒಲವೇ

ಒಳಗೊಳಗೆ ನಗುತಿರುವೆ ನಾನು, ನಿನ್ನ ಜೊತೆಗೂಡಿ ನಗುತಿರುವ ಬಾವ,
ಮುದ್ದು ಮನಸಿನ ಪೆದ್ದ ನಗುವಿದು
ಒಳಗೊಳಗೆ ಗುನುಗುತಿರುವೆ ನಾನು, ನಿನ್ನೊಡನೆ ಮಾತನಾಡುತಿರುವ ಬಾವ,
ಪೆದ್ದು
ಮನಸಿನ ಮುದ್ದು ಮಾತಿದು
ಒಳಗೊಳಗೆ ನನ್ನ ಮನದೊಳಗೆ ಕುಳಿತಿರುವೆ ನೀನು,
ನನ್ನೊಡನೆ ಮಾತನಾಡುತ, ನನ್ನ ನೀ ನಗಿಸುತ
ನನ್ನೊಳಗೆ ಕುಳಿತಿರುವ ನೀ ನನ್ನ ಒಲವೆ ಸರಿ

ನಿನ್ನೊಳಗೆ ಮೂಡುವ ಪೆದ್ದ ನಗು, ಮುದ್ದು ಮಾತಿನ ಬಗೆ ಏನೆಂದು ಕೇಳಿದರೆ ನಾ,
ಹೇಳಲು ನಾಚಿ ಕದ್ದು ನೋಡುವ ನಿನ್ನ ಕಣ್ಣುಗಳು, ನಗು ಬೀರುವ ನಿನ್ನ ತುಟಿಗಳು,
ಹೇಳುತಿವೆ ಮೌನದಲಿ ನನ್ನ ಒಲವು ನೀವೇ...

ಶ್....!!

Thursday, July 29, 2010

ಉಳಿಸು ನೆನಪನ್ನ

ನಿನ್ನ ನೆನಪಿನಂಗಳದ ಕೂಸು ನಾ,
ಈ ಕೂಸನಾಡಿಸುವ ನೆನಪು ನೀ...
ದಿನ ನೆನೆವೆ ನಿನ್ನ, ಕ್ಷಣ ಮರೆವೆ ನನ್ನ,
ಉಳಿಸು ನನ್ನ ನೆನಪನ್ನ.

ಶ್.....!!