Wednesday, March 16, 2016

ಅಪ್ಪ-ಅಮ್ಮ

ಎಲ್ಲರಿಗೂ ನನ್ನ ನಮಸ್ಕಾರಗಳು. ಅಪ್ಪ ಹಾಗೂ ಅಮ್ಮನಿಗೆ ಒಂದು ದಿನ ಆಚರಣೆ ಇದೆ ಎಂದು ನನಗೆ ತಿಳಿದದ್ದೇ ಅಮೇರಿಕ ಗೆ

ಬಂದಮೇಲೆ. ತಿಳಿದು ಕುಶಿ ಪಟ್ಟಿದೆನೋ ನಿಜ. ಆದ್ರೂ ಒಂದು ಸಂದೇಹ, ಈ ಜನ ಬಂದನಕ್ಕೆ ಇಸ್ಟು ಬೆಲೆ ಕೊಡುತ್ತರ? ಇವರಿಗೂ

ಅಪ್ಪ ಅಮ್ಮ ನನ್ನ ಕಂಡರೆ ನಮ್ಮಾಸ್ಟೆ ಪ್ರೀತಿ ನಾ! ಇದು ನನ್ನ ಸಣ್ಣ ಸಂದೇಹ. ಅದು ಹಾಗೆ ಇರಲಿ ಬಿಡಿ, ಇತ್ತೀಚಿನ ದಿನಗಳಲ್ಲಿ ನಮ್ಮ

ದೇಶದಲ್ಲೂ ಪ್ರೀತಿ ವಾತ್ಸಲ್ಯಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಈ ದಿನವನ್ನಾದರೂ ಸಂತೋಷದಿಂದ ಆಚರಿಸೋಣ. ಅಪ್ಪ

ಅಮ್ಮಂದಿರಿಗೆ ಸಣ್ಣದಾಗಿ ಶುಭಾಶಯ ಹೇಳಿ ನೋಡಿ, ಆಮೇಲೆ ನಿಮಗೆ ತಿಳಿಯುತ್ತದೆ ಆ ಕುಶಿಯ ರುಚಿ. ಯಾವ ಸಿಹಿ ತಿಂಡಿ ತಿಂದರೂ

ನಿಮಗೆ ಆಗದ ಆ ಒಂದು ಅನುಭವ. ಅವರ ಮುಖದಲ್ಲಿ ಅರಳುವ ಒಂದು ಪುಟ್ಟ ನಗು ದಿನವನ್ನು ಆಹ್ಲಾದ ಪಡಿಸುತ್ತದೆ.

ಅಪ್ಪ ಹಾಗೂ ಅಮ್ಮ ನಮ್ಮ ಜನ್ಮದಾತರು. ಕಾಣದ ದೇವರಿಗೆ ವಾರಕ್ಕೆ ಒಂದು ದಿನ, ವರುಷಕ್ಕೆ ಒಂದು ಹಬ್ಬ ಇರುವಾಗ ಕಾಣುವ

ದೇವರುಗಳಿಗೆ (ಅಪ್ಪ ಅಮ್ಮ) ವರುಷಕ್ಕೆ ಒಂದು ದಿನ ಬೇಡವೇ! ಕಂಡಿತ ಬೇಕು, ಇದು ನನ್ನ ಸ್ವಂತ ಅಭಿಪ್ರಾಯ. ಈ ಭೂಮಿಯ

ಮೇಲಿರುವ ಪ್ರತಿ ಜೀವಿಗೂ ಅಪ್ಪ ಅಮ್ಮ ಇರಲೇ ಬೇಕು ಅಲ್ವಾ. ಅದು ಪ್ರಾಣಿ, ಪಕ್ಷಿ, ಗಿಡ, ಮರ, ಮಾನವ ಇತ್ಯಾದಿ ಯಾವುದೇ

ಜೀವಿಗೂ ತಂದೆ ತಾಯಿ ಇದ್ದೇ ಇರುತ್ತಾರೆ. ಪ್ರಾಣಿ ಪಕ್ಷಿಗಳು ತಮ್ಮ ತಮ್ಮ ಕಂದಮ್ಮಗಳನ್ನು ಎಷ್ಟು ಪ್ರೀತಿ ಮಾಡುತ್ತವೆ

ತಿಳಿಯಬೇಕಾದ್ರೆ ಒಂದು ಹಸು ತನ್ನ ಕರುವಿಗೆ ಹಾಲುಣಿಸುವುದನ್ನು ನೋಡಿ, ಒಂದು ಕೋಳಿ ತನ್ನ ಮರಿಗಲ್ಲೂ ಬೆಚ್ಚಗಿರಿಸುವುದನ್ನು

ನೋಡಿ, ಒಂದು ಮರ ತನ್ನ ಸಸಿಗೆ ನೆರಳಾಗುವುದನ್ನು ನೋಡಿ. ಹಾಗೆ ನಮ್ಮ ತಂದೆ ತಾಯಿಯರು ನಮ್ಮನು ರಕ್ಷಿಶಿ, ಸುರಕ್ಷಿಶಿ,

ಕಾಪಾಡಿಕೊಂಡಿದ್ದಾರೆ. ಅವರ ಪ್ರೀತಿ ನಾವು ಗರ್ಭದಲ್ಲಿ ಇದ್ದಾಗಿನಿಂದ ಭೂಗರ್ಭ ಸೇರುವವರೆಗೂ ಅಚಲ. ತಾಯಿ ಪ್ರೀತಿ ಏನೆಂದು

ತಿಳಿಯಬೇಕಾದರೆ ಮತ್ತೊಬ್ಬ ತಾಯಿಗೆ ಮಾತ್ರ ಸಾಧ್ಯ, ಹಾಗೆ ತಂದೆ ಪ್ರೀತಿ ಕೂಡ ಮತ್ತೊಬ್ಬ ತಂದೆ ಮಾತ್ರ ತಿಳಿದೀತು! ಎನ್ನುವ

ಮಾತು ಸತ್ಯ.

ಒಂದು ಪರೀಕ್ಷೆ ಮಾಡೋಣ. ನೀವು ನಿಮ್ಮ ಅಪ್ಪ ಅಮ್ಮನೊಡನೆ ಅತಿ ಸಂತೋಷದಿಂದ ಕಾಲ ಕಳೆದ ಒಂದು ಸನ್ನಿವೇಶ ಒಮ್ಮೆ

ನೆನಪು ಮಾಡಿಕೊಳ್ಳಿ, ನಿಮ್ಮ ಬಾಲ್ಯದ ದಿನಗಳನ್ನ! ಯಾವುದಾದರೂ ಒಂದು ಹಾಳೆ ಫೋಟೋ ನೋಡಿ. ನಿಮ್ಮ ಅಮ್ಮನ ಒಂದು ಕೈ

ತುತ್ತು, ಅಪ್ಪ ಕೊಟ್ಟ ಒಂದು ಕೈ ಪೆಟ್ಟು ನೆನಪು ಮಾಡಿಕೊಳ್ಳಿ. ಅಪ್ಪನ ಜೊತೆ ಸೈಕಲ್ ಅಥವಾ ಸ್ಕೂಟರ್ ಅಲ್ಲಿ ಒಂದು ರೌಂಡ್ ಹಿಂದೆ

ಗಟ್ಟಿಯಾಗಿ ಕೂತಿದನ್ನು ನೆನಪಿಸಿಕೊಳ್ಳಿ. ನಿಮ್ಮ ಕಣ್ಣಲ್ಲಿನ ಸಣ್ಣ ಸಣ್ಣ  ನೆನಪು, ಒಂದು ಹನಿ ನೀರು ತುಂಬಿ ತರುತ್ತದೆ ಮನಸು ಹುಕ್ಕಿ

ಬರುತ್ತದೆ! ಅದೇ ಪ್ರೀತಿ, ಅದೇ ಅಕ್ಕರೆಯ ಒಂದು ಸಣ್ಣ ಕರೆ. ಆ ಮಧುರ ಭಾವವೇ ಭವ್ಯ ಬಂಧನ.

ಅಪ್ಪ ಅಮ್ಮನ ಪ್ರೀತಿ ವಾತ್ಸಲ್ಯ ನೆನಪಿಗೆ ಮಾತ್ರ ಸೀಮಿತವಾಗದಿರಲಿ. ನೀವು ನಿಮ್ಮ ಮಕ್ಕಳನ್ನು ಎಷ್ಟು ಪ್ರೀತಿ ಮಾಡುತ್ತೀರೋ,

ನಿಮ್ಮ ಅಪ್ಪ ಅಮ್ಮ ನಿಮ್ಮನ್ನು ಅಷ್ಟೇ ಪ್ರೀತಿ ಮಾಡಿರಬೇಕು ಅಲ್ಲವೇ! ಯಾಕಂದರೆ ನಮ್ಮ ವಿಜ್ಞಾನದ ಪ್ರಕಾರ ನಿಮ್ಮಲ್ಲೂ ಅವರದ್ದೇ

ರಕ್ತ ಹಾಗೂ ಅವರದ್ದೇ ಜೀನ್ ಅಲ್ವಾ ಇರೋದು!

ಅಮ್ಮನ ಕರುಳಿನಿಂದ ನಿಮ್ಮನ್ನು ಬೇರ್ಪಡಿಸಿರಬಹುದು! ಆದರೆ ಅದರ ಮಿಡಿತ ನಿಮ್ಮಲ್ಲೇ ಇದೆ! ಒಮ್ಮೆ ನಿಮ್ಮ ಎದೆ ಮುಟ್ಟಿ

ನೋಡಿಕೊಳ್ಳಿ, ನಿಮ್ಮ ಈ ಜೀವಕ್ಕೆ ಕಾರಣ ಅಪ್ಪ ಅಮ್ಮ. ಎಲ್ಲಾ ಅಪ್ಪ ಅಮ್ಮಂದಿರಿಗೂ ನಿಮ್ಮ ದಿನಕ್ಕೆ ಶುಭಾಶಯಗಳು.

ಇಂತಿ,

ಶ್....!
This was written for Minugu News Letter for TVKS - TriValley Kannada Sangha, San Ramon, CA.

No comments: