Sunday, January 27, 2008

ಮರೆಯಲೇ ನಿನ್ನ ನಾ ??

ನೆನೆದೆ ನಿನ್ನ ನಾ ಪ್ರತಿ ಹೃದಯದ ಬಡಿತದಲಿ, 
ಪ್ರತಿ ಉಸಿರಿನ ಸೆಳೆತದಲ್ಲಿ, ನನ್ನ ಮನದಾಳದ ಮಾತುಗಳಲ್ಲಿ ನೀನಿದ್ದೆ...

ಹೃದಯದ ಬಡಿತ, ನನ್ನ ಉಸಿರು, ಮನದಾಳದ ಮಾತು ನೀನೇ ಎಂದು ಹೇಳಲೋರಟೆ ನಾ...

ತಿಳಿಯದಾದೆ ನಾ, ಈ ಹೃದಯದ ಬಡಿತವೇ ನಿಂತಂತಾಗಿ, ಉಸಿರು ಕಟ್ಟಿ,
ಮನದಾಳದ ಮಾತುಗಳನ್ನೇ ಮರೆತಂತಾಗಿದೆ...

ಆದರೂ ನಾ ಉಳಿದಿರುವೆ! ಉಸಿರಾಡುವೆ! ಮನದಾಳದ ಮಾತನಾಡುವೆ!
ಸತ್ಯವನ್ನೇ ಅರಿಯದವರು ಧೂಡಿದರು ನನ್ನ ಹುಚ್ಚನೆಂದು... 

ಮರೆವೇ  ನಾ ಇದನೆಲ್ಲ, ನಿನ್ನ ನಾ ಮರೆತಾಕ್ಷನ.. 
ಮರೆಯಲೇ ನಿನ್ನ ನಾ ?? ಮರೆಯಲೇ ನಿನ್ನ ನಾ ??


-ಶ್....!

No comments: